PUCL Karnataka Towards civil liberties and human rights for all in Karnataka

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆ ಸುಗ್ರೀವಾಜ್ಞೆ – 2022: ಪಿ.ಯು.ಸಿ.ಎಲ್ ತೀವ್ರ ಖಂಡನೆ.

05.23.2022 · Posted in Uncategorized

ತಾರೀಕು 17.05.2022 ರಂದು ಕರ್ನಾಟಕ ಸರ್ಕಾರವು ಒಂದು ಅಸಾಧಾರಣ ಕ್ರಮದ ಮೂಲಕ “ಕನಾ೯ಟಕ
ಧಾರ್ಮಿಕ ಸ್ವಾತಂತ್ರದ ಹಕ್ಕು ರಕ್ಷಣೆ -2022” ಎಂಬ ಸುಗ್ರೀವಾಜ್ಞೆ ಹೊರಡಿಸಿದೆ. ಈ ಸುಗ್ರೀವಾಜ್ಞೆ
ಹೊರಡಿಸಬೇಕಾದ ಸನ್ನಿವೇಶವಾಗಲೀ , ತುರ್ತಾಗಲೀ ಇರಲಿಲ್ಲ. ಇದು ಭಾರತದ ಸಂವಿಧಾನಕ್ಕೆ ಮಾಡಿದ ಘೋರ
ಅಪಚಾರ. ಇದು ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ವಿಧಿಸಿರುವ ಅಧಿಕಾರ
ವಿಭಜನೆಯ ತತ್ವಗಳ ಅಣಕವಾಗಿದೆ. ಶಾಸಕಾಂಗಕ್ಕೆ ಮಾತ್ರ ಶಾಸನ ಮಾಡುವ ಅಧಿಕಾರವನ್ನು ಸಂವಿಧಾನ
ನೀಡಿದೆ. ಕಾರ್ಯಾಂಗಕ್ಕೆ ಈ ಅಧಿಕಾರ ಇಲ್ಲ.


ಈ ತಿದ್ದುಪಡಿ ಎಲ್ಲಾ ಭಾರತೀಯರಿಗೆ ಸಂವಿಧಾನ ಖಾತ್ರಿ ಪಡಿಸಿರುವ ಸಂವಿಧಾನಿಕ ಸ್ವತಂತ್ರಗಳ ಮೇಲಿನ
ದಾಳಿಯಾಗಿದೆ. ಇದರಿಂದಾಗಿ ಈವರೆಗೂ ವಿವಿಧ ಧರ್ಮಗಳು ,ನಂಬಿಕೆಗಳ ನಡುವೆ ಇದ್ದ ಶ್ರೀಮಂತವಾದ
ಸಾಂಸ್ಕೃತಿಕ ಸಂಬಂಧಗಳು ಮತ್ತು ಜಾತ್ಯತೀತ ತತ್ವಗಳಿಗೆ ಮತ್ತು ಸೌಹಾರ್ದತೆಗೆ ಮಸಿ ಬಳೆದಂತೆ ಆಗಿದೆ.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅಲ್ಪಸಂಖ್ಯಾತ
ಸಮುದಾಯಗಳು ಭಯ ಮತ್ತು ಅಭದ್ರತೆಗಳಿಂದ ನರಳುತ್ತಿವೆ. ಚರ್ಚುಗಳನ್ನು ಒಡೆಯುವ ಬೆದರಿಕೆಯನ್ನು ಹಿಂದುತ್ವ
ಸಂಘಟನೆಗಳು ನೇರವಾಗಿ ಹಾಕುತ್ತಿವೆ. ಮತೀಯ ಪೊಲೀಸ್ ಗಿರಿ ಹೆಸರಿನಲ್ಲಿ ಅಲ್ಪಸಂಖ್ಯಾತರ ಚಲನವಲನಗಳ
ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ಅಜಾನ್‌ ಮೇಲಿನ ನಿರ್ಭಂದ ,ಮುಸ್ಲಿ೦ ವ್ಯಾಪಾರಿಗಳಿಗೆ ಬಹಿಷ್ಕಾರ, ಹಿಜಾಬ್‌
ವಿರುದ್ಧ ನಿರ್ಭಂದ, ಇತ್ಯಾದಿ ಕ್ರಮಗಳ ಮೂಲಕ ಮುಸ್ಲಿ೦ ಸಮುದಾಯ ಭಯ ಮತ್ತು ಅಭದ್ರತೆಯಿ೦ದ
ನರಳುವಂತಾಗಿದೆ. ಸಮಾನತೆ, ಬಂಧುತ್ವ, ಘನತೆಯನ್ನು ಎತ್ತಿಹಿಡಿಯುವ, ಭೇದ-ಭಾವವನ್ನು ಒಪ್ಪದಿರುವ
ಸಾಂವಿಧಾನಿಕ ಶ್ರೇಷ್ಟ ಪರಿಕಲ್ಪನೆಗಳ ಮೇಲೆ ದಾಳಿ ಎಸುಗುತ್ತಿರುವ ಹಿಂದೂತ್ವ ಗುಂಪುಗಳ ಚಟುವಟಿಕೆಯನ್ನು
ಗಮನಿಸಿ, ನಿಗ್ರಹಿಸುವ ಕ್ರಮ ತೆಗೆದುಕೊಳ್ಳುವಲ್ಲಿ ಸರ್ಕಾರವು ವಿಫಲವಾಗಿದೆ. ಈ ಪರಿಸ್ಧಿಯತಿಯಲ್ಲಿ ರಾಜ್ಯಪಲರು
ಹೋರಡಿಸಿರುವ ಸುಗ್ರಿವಾಜ್ಞೆ ಮತ್ತು ಸಂಪುಟದ ನಿಧಾ೯ರವು ಈ ಪುಂಡರ ಗುಂಪುಗಳಿಗೆ ಸರಕಾರದ ಬೆಂಬಲ ಇದೆ
ಎನ್ನುವುದನ್ನು ಸ್ಪಪ್ಟವಾಗಿಸಿದೆ. ಸಂವಿಧಾನದ ಅನ್ಪಯ ಕನಾ೯ಟಕದ ಮುಖ್ಸಸ್ಧರಾಗಿರುವ ರಾಜ್ಯಪಾಲರು ಮೇಲು
ನೋಟಕ್ಕೇ ಅಸಂವಿಧಾನಿಕ ಎಂದು ಕಾಣುವ (ಮತ್ತು ಮುಂದಿನ ದಿವಸಗಳಲ್ಲಿ ಕಾನೂನು ಆಗಿಬಿಡುವ) ಈ
ಸುಗ್ರಿವಾಜ್ಞೆಯನ್ನು ಹೊರಡಿಸಿರುವುದು ಸಂವಿಧನಕ್ಕೆ ಎಸಗಿದ ಅಪಚಾರವಾಗಿದೆ. ಇದು ಸಂವಿಧಾನವಿರೋಧಿ
ನಡೆಯಾಗಿದೆ.


ಈ ಸುಗ್ರಿವಾಜ್ಞೆಯನ್ನು ಹೊರಡಿಸುವ ಮುನ್ನ ರಾಜ್ಯಪಾಲರು , ಅಲ್ಪಸಂಖ್ಯಾತರು ಮೇಲೆ ನಡೆದ ಈ ಎಲ್ಲಾ ಹಲ್ಲೆ ,
ದಾಳಿಗಳನ್ನು ಗಮನಕ್ಕೆ ತೆಗೆದುಕೊಳ್ಳುವುದಲ್ಲಿ ಸಂಪೂಣ೯ ವಿಫಲರಾಗಿದ್ದಾರೆ. ಇದು ಕಳವಳಕಾರಿಯಾದ
ಸಂಗತಿ.

ಪಿ.ಯು.ಸಿ.ಎಲ್‌ ತನ್ನ ಇತ್ತಿಚಿನ ವರದಿಯಲ್ಲಿ (CRIMINALISING THE PRACTICE OF FAITH) ಕ್ರೈಸ್ತ ರ
ವಿರುದ್ಧ ನಡೆದ ಈ ರೀತಿಯ 62 ನಿದಿಷ್ಟ ಪ್ರಕರಣಗಳನ್ನು ದಾಖಲಿಸಿದೆ. ಮತಾಂತರ ಎಂಬ ಭಯ ಸೃಷ್ಠಿಸಿ,
ಅದನ್ನು ಮುಂದು ಮಾಡಿ, ಕುಕೃತ್ಯ ನಡೆಸಿರುವುದನ್ನು ಈ ವರದಿ ಅನಾವರಣಗೂಳಿಸಿದೆ. ಈ ಸುಗ್ರಿವಾಜ್ಞೆ
ಹಿಂದೂತ್ವಪಡೆಗಳ ಕಾನೂನು ಬಾಹಿರ ಮತ್ತು ಬಲವಂತದ ಬೆದರಿಕೆಗಳಿಗೆ ಕಾನೂನಿನ ಮಾನ್ಯತೆ
ದೂರಕಿಸಿಕೊಡುತ್ತದೆ. ಈ ಸುಗ್ರಿವಾಜ್ಞೆಯಿಂದಾಗಿ, ಅಲ್ಪಸಂಖ್ಯಾತರ ಮೇಲಿನ ಹಲ್ಲೆ ದಾಳಿಗೆ ಸಂಬಂಧಿದಂತೆ
ಕನಾ೯ಟಕ ಅಪಾಯಕಾರಿಯಾದ ಹೊಸ ಹಂತ ತಲುಪಿದಂತಾಗಿದೆ.
ಆಮಿಷ ಒಡ್ಡಿ ಮತಾ೦ತರ ಮಾಡುವುದನ್ನು ಮತ್ತು ಮದುವೆ ಆಸೆ, ಭರವಸೆ ತೋರಿ
ಮತಾ೦ತರಗೊಳಿಸುವುದನ್ನು ಅಪರಾದೀಕರಣಗೊಳಿಸಿರುವುದು ಮತ್ತು ಮತಾ೦ತರದ ಸುತ್ತ ಇರುವ
ನಿಯಮ-ನಿಬ೯೦ಧಗಳು ಈ ಸುಗ್ರಿವಾಜ್ಞೆಯ ಹೃದಯಭಾಗ(ತಿರುಳು)ವಾಗಿದೆ. “ಕೊಡೂಗೆಗಳು,
ಕೃತಜ್ಞತೆಗಳನ್ನು ನಗದು ರೂಪದಲ್ಲಿ ನೀಡುವುದು ಅಥವಾ ಸೇವೆಗಳ ರೂಪದಲ್ಲಿ ನೀಡುವುದನ್ನೂ, ಉದ್ಯೋಗ
ಹಾಗೂ ಉಚಿತ ಶಿಕ್ಷಣವನ್ನು” ಆಮಿಷಗಳ ಪಟ್ಟಿಗೆ ಸೇರಿಸಲಾಗಿದೆ. ಇದರಿಂದಾಗಿ, ಧರ್ಮಾತೀತವಾಗಿ
ಶಾಲೆಗಳನ್ನು ಮತ್ತು ಉದ್ಯೋಗ ಕೇ೦ದ್ರಗಳನ್ನು ನಡೆಸುವುದನ್ನು ಈಗ ಸುಲಭವಾಗಿ ಮತಾ೦ತರದ
ಉದ್ದೇಶಕಾಗಿ ನಡೆಸಲಾಗುತ್ತಿದೆ ಎ೦ದು ಆರೋಪಿಸಲು ಸಾಧ್ಯವಿದೆ. ಇದರಿಂದ ಕ್ರೈಸ್ತ ಸಂಸ್ದೆಗಳು ನಡೆಸುವ
ಎಲ್ಲ ಧಮ೯ಥ೯ದ ಚಟುವತಟಿಕೆಗಳು ಅಪರಾಧವಾಗುತ್ತದೆ. ಇದು ನಮ್ಮ ಭ್ರಾತೃತ್ವದ ಪರಿಕಲ್ಪನೆಯ
ಮೇಲೆ, ಅದರ ವ್ಯಾಪ್ತಿಯ ಮೇಲೆ ಆಳವಾದ ಪರಿವಾಮ ಬೀರುತದೆ.
ಪ್ರೇಮ ವಿವಾಹಗಳನ್ನು ಅದರಲ್ಲಿಯೂ ವಿಶೇಷವಾಗಿ, ಅಂತರ ಧರ್ಮೀಯ ವಿವಾಹಗಳನ್ನು ಮದುವೆಯ
ಭರವಸೆಯೊಂದಿಗಿನ ಮತಾಂತರ ಎಂಬುದರ ಕೆಳಗೆ ಅಪರಾಧ ಎಂದು ಪರಿಗಣಿಸಬಹುದಾಗಿದೆ. ಇದು
ನಮಗೆ ಬೇಕಾದವರನ್ನು ವಿವಾಹವಾಗುವ ಮತ್ತು ನಮಗೆ ಬೇಕಾದ ಧಮ೯ವನ್ನು ಆಯ್ಕೆ ಮಾಡಿ ಕೊಳ್ಳುವ
ಸಂವಿಧಾನದತ್ತ ಹಕ್ಕನ್ನು ನಿರಾಕರಿಸುತ್ತದೆ. ಇದು ಸಂವಿಧಾನದ ತಿರುಳಿನಂತಹ ಪರಿಕಲ್ಪನೆಯಾಗಿದೆ.
ಈ ಸುಗ್ರೀವಾಜ್ಞೆಯು ಕಾನೂನು ಬಾಹಿರ ಮತಾಂತರದ ವಿರುದ್ದವಿದೆ ಎಂಬ ಮೊಗವಾಡವನ್ನೂ ಇದು ಕಳಚಿಟ್ಟಿದೆ.
ಈಗ ಮತಾಂತರ ಆಗಬೇಕಾದರೆ ಆಡಳಿತಶಾಹಿ ಪೋಲಿಸ್ ನಿರ್ಭಂಧಗಳ ವ್ಯಾಪ್ತಿಯಲ್ಲಿ ಆಗಬೇಕಾಗುತ್ತದೆ.
ಈ ಸುಗ್ರಿವಾಜ್ಞೆಯ ೮ನೆಯ ನಿಯಮದ ಪ್ರಕಾರ ಮತಾಂತರಗೊಳ್ಳುವ ವ್ಯಕ್ತಿ ಮತ್ತು ಮತಾಂತರ ಪ್ರಕ್ರಿಯೆ
ನಡೆಸುವ ವ್ಯಕ್ತಿಯು ೩೦ ದಿವಸ ಮೊದಲು ಜಿಲ್ಲಾ ಮ್ಯಾಜಿಸ್ಟ್ರೇಟ‌ರಿಗೆ ಅಜಿ೯ ನೀಡಿ ಮಾಹಿತಿ ಕೊಡಬೇಕು.
೩೦ ದಿನಗಳ ಮೊದಲೇ ನೋಟೀಸ್ ಕೊಡಬೇಕು ಎಂಬ ಈ ನಿಯಮ ಹಾಗು ಇದರ ವಿವರಗಳನ್ನು
ಸಾವ೯ಜನಿಕವಾಗಿ ಪ್ರದಶಿ೯ಸುವುದು ಸಂವಿಧಾನ ನೀಡಿರುವ ಖಾಸಗೀತನದ ಹಕ್ಕಿನ ಉಲ್ಲಂಘನೆಯಾಗಿದೆ.
ಪುಟ್ಟಸ್ವಾಮಿ Vs. ಭಾರತ ಸರಕಾರ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟು ಇದನ್ನು ಸ್ಪಷ್ಟಪಡಿಸಿದೆ.
ಧರ್ಮಾಥ೯ ದಾನಗಳು, ಅಂತರಧಮಿ೯ಯ ಪ್ರೇಮ ಮತ್ತು ವಿವಾಹ, ಧಾಮಿ೯ಕ ಹಕ್ಕು – ಇದು ಈ
ಸುಗ್ರೀವಾಜ್ಞೆಯ ಅನ್ವಯ ಅಪರಾಧಗಳು. ಇದನ್ನು ಸಂವಿಧಾನವನ್ನು ನಂಬುವವರೆಲ್ಲರೂ ಪ್ರತಿಭಟಿಸಬೇಕು.

ಇಂದು, ಸಂವಿಧಾನವನ್ನು ನಂಬುವವರು, ನಮ್ಮ ಬದ್ದತೆಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ಮೂಲ ಭೂತ
ಹಕ್ಕುಗಳಿಗಾಗಿ ಮತ್ತು ಸ್ವಾತಂತ್ರ್ಯಕ್ಕೆ ಹೋರಾಡುವ ನಮ್ಮ ನಿಧಾ೯ರವನ್ನು ಬಲಪಡಿಸಿಕೊಳ್ಳಬೇಕು. ತಾರೀಕು
೨೬. ೧. ೧೯೫೦ ರಂದು ನಮಗೆ ನಾವೇ ಅಪಿ೯ಸಿಕೊಂಡ ʼಭಾರತೀಯದ ನಾವು…ʼ ಪರಿಕಲ್ಪನೆಯ
ಸಂವಿಧಾನದ ಹಕ್ಕು ಗಳಿಗೆ ಹೋರಾಡುವುದು ಇಂದಿನ ಅನಿವಾರ್ಯತೆ ಮತ್ತು ಇದನ್ನು ಹೊರತುಪಡಿಸಿ ನಮಗೆ
ಬೇರಾವ ದಾರಿಯಿಲ್ಲ.

ನ್ಯಾಯವಾದಿ ಅರವಿಂದ್‌ ನಾರಾಯಣ್‌
ಅಧ್ಯಕ್ಷರು
ಪಿಯುಸಿಎಲ್‌ – ಕರ್ನಾಟಕ

ನ್ಯಾಯವಾದಿ ರಾಬಿನ್‌ ಕ್ರಿಷ್ಟೋಫರ್‌
ಪ್ರಧಾನ ಕಾರ್ಯದರ್ಶಿ
ಪಿಯುಸಿಎಲ್‌ – ಕರ್ನಾಟಕ

ಶುಜಾಯತುಲ್ಲಾಹ್
ಅಧ್ಯಕ್ಷರು
ಪಿಯುಸಿಎಲ್‌ – ಬೆಂಗಳೂರು

Comments are closed